http://vivekavidyakendra.in/wp-content/uploads/2017/01/WhatsApp-Image-2017-01-21-at-8.32.25-AM.jpeg
http://vivekavidyakendra.in/wp-content/uploads/2017/01/WhatsApp-Image-2017-01-20-at-10.17.04-PM.jpeg
http://vivekavidyakendra.in/wp-content/uploads/2017/01/WhatsApp-Image-2017-01-20-at-10.17.01-PM.jpeg

ವಿವೇಕ ವಿದ್ಯಾಕೇಂದ್ರ ಚಿಕ್ಕಮಗಳೂರು ಜಿಲ್ಲೆಯ ಕೆ.ಆರ್ ಪೇಟೆ ಎಂಬ ಪುಟ್ಟ ಹಳ್ಳಿಯಲ್ಲಿರುವ ಒಂದು ಶಾಲೆ. 29 ವರ್ಷಗಳಷ್ಟು ಮೊದಲೇ ಆರಂಭವಾದ ಈ ಶಾಲೆ ಹಲವು, ಏರಿಳಿತವನ್ನು ಕಾಣುತ್ತಾ, ಮುಂದುವರೆಯುತ್ತಿದೆ.

ಈ ಮೊದಲು ಚೇತನ ಕಾನ್ವೆಂಟ್ ಶಾಲೆ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಈ ಶಾಲೆಯನ್ನು 2016-17ನೇ ಶೈಕ್ಷಣಿಕ ವರ್ಷದಿಂದ ಬೆಂಗಳೂರಿನ ‘ಸಂಜೀವಿನಿ ಭಾರತ್’ ಎಂಬ ಸ್ವಯಂ ಸೇವಾ ಸಂಸ್ಥೆ ಮುನ್ನಡೆಸುತ್ತಿದೆ. ಈ ಭಾಗದಲ್ಲಿ ವಿವೇಕಾ ವಿದ್ಯಾಕೇಂದ್ರ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಉತ್ತಮ ವಿಚಾರಗಳನ್ನು ಸಮಾಜಕ್ಕೆ ಕೊಡುವ ಬಹು ದೊಡ್ಡ ಗುರಿಯನ್ನು ಹೊಂದಿದೆ. ಸಮಾಜದಿಂದ ಸಮಾಜಕ್ಕಾಗಿಯೇ ನಡೆಯಬೇಕು ಎಂಬ ಗುರಿ ವಿವೇಕಾ ವಿದ್ಯಾಕೇಂದ್ರದ್ದು‌

ಶೈಕ್ಷಣಿಕ ವಿಚಾರಗಳ ಜೊತೆಯಲ್ಲಿ, ಈ ನೆಲದ, ಮಣ್ಣಿನ ಕಣ-ಕಣದ ಸಂಗತಿಗಳನ್ನೂ ಮಕ್ಕಳಿಗೆ ತಿಳಿಸಿಕೊಡುತ್ತಾ, ಈ ಪುಟ್ಟ ಮಕ್ಕಳನ್ನು ಭವ್ಯ ಭಾರತದ ಸತ್ಪ್ರಜೆ ಗಳನ್ನಾಗಿಸುವುದು ಸಂಜೀವಿನಿ ಭಾರತ್ ಹಾಗೂ ವಿದ್ಯಾಕೇಂದ್ರದ ಮಹತ್ವದ ಗುರಿಯಾಗಿದೆ‌.
ಹೀಗೆ, ಯುವ ಸಮೂಹದ ಚಿಂತನೆಯಿಂದ ರೂಪುಗೊಂಡಿರುವ ಸಂಜೀವಿನಿ ಭಾರತ್ ಹಾಗೂ ವಿವೇಕಾ ವಿದ್ಯಾಕೇಂದ್ರದ ಚಿಂತನೆಗಳು ಅನುಷ್ಠಾನಕ್ಕೆ ಬರುವಲ್ಲಿ ತಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ಅಗತ್ಯ.

Contact Details
Viveka VidyaKendra
KR Pete, Chikmagalur (Tq & Dist), Karnataka
9483473311, 8105655659